ಏಡುಕುಂಡಲವಾಡ ವೆಂಕಟರಮಣ ಗೋವಿಂದ..ಗೋವಿಂದ..
ಈ ಘೋಷಣೆಯೇ ಒಂದು ರೀತಿಯ ರೋಮಾಂಚನಕಾರಿ..ಈ ಘೋಷವಾಕ್ಯ ಕೇಳಿಸಿದ್ರೆ ಸಾಕು ಅಲ್ಲೊಂದು ಪಾಸಿಟಿವ್ ಎನರ್ಜಿ ಕ್ರಿಯೇಟ್ ಆಗುತ್ತೆ.
ವೆಂಕಟೇಶ್ವರ ಎಂದರೆ ವೆಂಕಟಗಳ ಅಧಿಪತಿ. ಅದರ ಅರ್ಥ ಭಗವಾನ್ ವೆಂಕಟೇಶ್ವರನು ನಮ್ಮ ಪಾಪಗಳನ್ನು ನಿವಾರಿಸುತ್ತಾನೆ. ವೆಂಕಟೇಶ್ವರ ಎನ್ನುವ ಪದಕ್ಕೆ ಇನ್ನೂ ಒಂದೊಂದು ಅರ್ಥವಿದೆ. ವೆಂಕಟ ಗಿರಿ ಎನ್ನುವುದು ಆಂಧ್ರಪ್ರದೇಶದಲ್ಲಿರುವ ಒಂದು ಬೆಟ್ಟ. ಈಶ್ವರ ಎಂದರೆ ಒಡೆಯ. ಈ ಬೆಟ್ಟಗಳ ಒಡೆಯನೇ ವೆಂಕಟೇಶ್ವರ ಅಂತ ಕರೆಯುತ್ತಾರೆ.
ವೆಂ ಎಂದರೆ ಪಾಪ ಮತ್ತು ಕಟ ಎಂದರೆ ಶಕ್ತಿ ಮತ್ತು ನಿವಾರಕ ಎಂದು ಸಂಸ್ಕೃತದಲ್ಲಿ ಹೇಳುತ್ತಾರೆ. ವೆಂಕಟೇಶ್ವರನಿಗೆ ಗೋವಿಂದ ಮತ್ತು ಬಾಲಾಜಿ ಎಂತಲೂ ಹೆಸರಿದೆ. ಈ ದೇವನು ತನ್ನ ಭಕ್ತರನ್ನು ಸುಖ, ಶಾಂತಿ, ಯಶಸ್ಸು, ಸಂಪತ್ತನ್ನು ಕರುಣಿಸುತ್ತಾನೆ ಎಂಬುವುದು ಕೋಟ್ಯಾಂತರ ಭಕ್ತರ ಐತಿಹ್ಯ. ಧೃವ, ಕೌತುಕ, ಸ್ನಪನ, ಉತ್ಸವ ಮತ್ತು ಬಲಿ ಬೆರಮ್ ಎನ್ನುವ ಐದು ದೇವತೆಗಳನ್ನು ವೆಂಕಟೇಶ್ವರನು ಪ್ರತಿನಿಧಿಸುತ್ತಾನೆ ಎಂಬ ನಂಬಿಕೆ ಇದೆ.
…
ವೆಂಕಟೇಶ್ವರನನ್ನು ಪೂಜಿಸಲು ಓಂ ನಮೋ ವೆಂಕಟೇಶಾಯ, ಓಂ ನಮೋ ನಾರಾಯಣ ಎಂದರೆ ಸಾಕು ಕರೆದವರ ಸಹಾಯಕ್ಕೆ ಧಾವಿಸುತ್ತಾನೆ ತಿರುಪತಿ ತಿಮ್ಮಪ್ಪ. ವೆಂಕಟೇಶ್ವರನನ್ನು ಕಲಿಯುಗ ದೈವ ಎಂದು ಕರೆಯುವ ಕಾರಣ ಆತ ನೆಲೆಸಿರುವ ತಿರುಪತಿಯನ್ನು ಕಲಿಯುಗ ವೈಕುಂಠ ಎಂದು ಹೇಳಲಾಗುತ್ತದೆ.
ಭಗವಾನ್ ವೆಂಕಟೇಶ್ವರ ಮತ್ತು ತಿರುಮಲವನ್ನು ಪದ್ಮ ಪುರಾಣ, ವರಹ ಪುರಾಣ, ಗರುಡ ಪುರಾಣ, ಬ್ರಹ್ಮಂಡ ಪುರಾಣ ಬ್ರಹ್ಮೋತ್ತರ ಪುರಾಣ, ಮಾರ್ಕಂಡೇಯ ಪುರಾಣ, ಹರಿವಂಶ, ವಾಮ ಪುರಾಣ, ಬ್ರಹ್ಮ ಪುರಾಣ, ಆದಿತ್ಯ ಪುರಾಣ, ಸ್ಕಂದ ಪುರಾಣ ಉಲ್ಲೇಖಿಸಿವೆ. ಭಗವಾನ್ ವಿಷ್ಣುವಿನ ವೆಂಕಟೇಶ್ವರನ ಅವತಾರವನ್ನು ಒಂದು ದೊಡ್ಡ ಪ್ರಮುಖ ಘಟ್ಟ ಎಂದೇ ನಂಬಲಾಗಿದೆ.
…
ಒಟ್ಟಾರೆ ನಂಬಿದವರನ್ನ ಎಂದೂ ಕೈಬಿಡದ ಕಲಿಯುಗದ ಸಾಕ್ಷಾತ್ ದೇವರು ವೆಂಕಟೇಶ್ವರ. ಹೀಗಾಗಿಯೇ ಆತನ ಸನಿಧಿಗೆ ದಿನಿತ್ಯವೂ ಲಕ್ಷಾಂತರ ಭಕ್ತರು ದರ್ಶನ ಮಾಡಿ ಪುನೀತರಾಗುತ್ತಿದ್ದಾರೆ.